DECEMBER 9, 2022
  • Grace Plaza, 2nd Floor, Bailoor,Udupi – 576101
National News

Karnataka Budget 2026–27: ಸಿದ್ದು 'ದಾಖಲೆ'ಯ 17ನೇ ಬಜೆಟ್‌ ಮಂಡನೆಗೆ ಕ್ಷಣಗಣನೆ,

Karnataka Budget 2026–27: ಸಿದ್ದು 'ದಾಖಲೆ'ಯ 17ನೇ ಬಜೆಟ್‌ ಮಂಡನೆಗೆ ಕ್ಷಣಗಣನೆ,

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂದು ಮಾರ್ಚ್‌ 6ರಂದು ಶುಕ್ರವಾರ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ತಮ್ಮ ವೃತ್ತಿಜೀವನದ 17ನೇ ಬಜೆಟ್ ಮಂಡಿಸಲಿದ್ದು, ಆರ್ಥಿಕ ಶಿಸ್ತು ಹಾಗೂ ಜನಪ್ರಿಯ ಯೋಜನೆಗಳ ನಡುವೆ ಸಮತೋಲನ ಸಾಧಿಸುವ ಗುರಿ ಹೊಂದಿದ್ದಾರೆ.

ಬಜೆಟ್‌ನ ಪ್ರಮುಖ ಮುಖ್ಯಾಂಶಗಳು :

  1. ದಾಖಲೆಯ ಮಂಡನೆ: ಕಳೆದ 30 ವರ್ಷಗಳಲ್ಲಿ ಕರ್ನಾಟಕ ಮಂಡಿಸಿದ ಅರ್ಧದಷ್ಟು ಬಜೆಟ್‌ಗಳನ್ನು (17 ಬಾರಿ) ಸಿದ್ದರಾಮಯ್ಯ ಅವರೇ ಮಂಡಿಸಿದಂತಾಗುತ್ತದೆ.
  2. ಬಜೆಟ್ ಗಾತ್ರ: ಈ ಬಾರಿಯ ಆಯವ್ಯಯದ ಮೊತ್ತ 4.5 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ.
  3. ಗ್ಯಾರಂಟಿಗಳ ಹೊರೆ: ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸುವ ಜೊತೆಗೆ ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದು ಸಿಎಂ ಮುಂದಿರುವ ದೊಡ್ಡ ಟಾಸ್ಕ್.


ಜನಸಾಮಾನ್ಯರಿಗೆ ಸಿಗಲಿರುವ ಕೊಡುಗೆಗಳೇನು?

ಸಾಲದ ಹೊರೆಯಿದ್ದರೂ ಮತದಾರರನ್ನು ಸೆಳೆಯಲು ಹಲವು ಹೊಸ ಘೋಷಣೆಗಳ ನಿರೀಕ್ಷೆಯಿದೆ:

  1. ಇಂದಿರಾ ಆಹಾರ ಕಿಟ್: ಬಡ ಕುಟುಂಬಗಳಿಗೆ ವಿಶೇಷ ಪಡಿತರ ಕಿಟ್ ವಿತರಣೆ.
  2. ಗೃಹ ಲಕ್ಷ್ಮಿ ಬೋನಸ್: ಫಲಾನುಭವಿಗಳಿಗೆ ಮಾಸಿಕ ಧನದ ಜೊತೆಗೆ ಉಚಿತ ಸೀರೆ ವಿತರಣೆ ಸಾಧ್ಯತೆ.
  3. ನೋಂದಾಯಿತ ವಸತಿ: ಬಾಕಿ ಉಳಿದಿರುವ ವಸತಿ ಯೋಜನೆಗಳ ಗೊಂದಲ ನಿವಾರಿಸಿ ಮನೆ ಹಂಚಿಕೆಗೆ ವೇಗ.
  4. ಪ್ರಾದೇಶಿಕ ಅಭಿವೃದ್ಧಿ: ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕನಿಷ್ಠ 5,000 ಕೋಟಿ ರೂ. ಅನುದಾನ ಮೀಸಲಿಡುವ ಸಾಧ್ಯತೆ.


ತೆರಿಗೆ ಏರಿಕೆಯ ಬಿಸಿ ಯಾರಿಗೆ?

ಬಜೆಟ್ ಕೊರತೆಯನ್ನು ನೀಗಿಸಲು ಸರ್ಕಾರ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಬಹುದು:

ಇಂಧನ ಸೆಸ್: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 1 ರೂ. ಸೆಸ್ ಹೆಚ್ಚಳದ ಭೀತಿ.

ಅಬಕಾರಿ ಸುಂಕ: ಮದ್ಯದ ಮೇಲಿನ ತೆರಿಗೆಯಿಂದ ಬರುವ ಆದಾಯದ ಗುರಿಯನ್ನು 45,000 ಕೋಟಿ ರೂ.ಗೆ ಏರಿಸುವ ಸಾಧ್ಯತೆ.

ಇತರೆ: ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹಾಗೂ ಗೈಡ್‌ಲೈನ್ ದರಗಳ ಪರಿಷ್ಕರಣೆ.


ಆರ್ಥಿಕ ಸವಾಲುಗಳು ಮತ್ತು ಸಂಪನ್ಮೂಲ ಕ್ರೋಢೀಕರಣ

ರಾಜ್ಯದ ಒಟ್ಟು ಸಾಲದ ಪ್ರಮಾಣ ಈಗಾಗಲೇ 7.5 ಲಕ್ಷ ಕೋಟಿ ರೂ. ದಾಟಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಇದು 8.41 ಲಕ್ಷ ಕೋಟಿ ರೂ. ತಲುಪುವ ಅಂದಾಜಿದೆ. ಆದಾಯ ಹೆಚ್ಚಿಸಲು ಸರ್ಕಾರ 'ಆಸ್ತಿ ನಗದೀಕರಣ' (Asset Monetization) ಮೊರೆ ಹೋಗುವ ಸಾಧ್ಯತೆಯಿದೆ. ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಭೂಮಿಗಳನ್ನು ಲೀಸ್‌ಗೆ ನೀಡುವುದು ಅಥವಾ ಮಾರುಕಟ್ಟೆ ದರಕ್ಕೆ ಲೀಸ್ ಮೊತ್ತವನ್ನು ಪರಿಷ್ಕರಿಸುವ ಮೂಲಕ ಹಣ ಸಂಗ್ರಹಿಸಲು ಕೆ.ಪಿ. ಕೃಷ್ಣನ್ ಸಮಿತಿ ಶಿಫಾರಸು ಮಾಡಿದೆ.


  1. ಗ್ಯಾರಂಟಿ ಯೋಜನೆಗಳ ಯಶಸ್ಸಿನ ನಡುವೆಯೂ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಸಿಎಂ ಎಷ್ಟು ಹಣ ಮೀಸಲಿಡುತ್ತಾರೆ ಎಂಬುದು ಕುತೂಹಲದ ಸಂಗತಿ. ಇಂದಿನ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಲ್ಲದೆ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಒಂದು 'ರಾಜಕೀಯ ಪ್ರಣಾಳಿಕೆ'ಯೂ ಆಗುವ ಸಾಧ್ಯತೆಯಿದೆ.

Related News

About Us

Indian Christian Human Rights Federation

Indian Christian Human Rights Forum is a catalyst body standing by the Churches in India with the passion to cater legal, moral and other support.

This organization was Launched in 2008 and has brought legal and political pressure against the injustice on Christians and provided divers kind of assistance to God's Servants, People and the Needy and is always ready to continue to assist.

We are committed to provide all kind of legal assistance to the Churches in times of atrocities and persecution. Also, we provide moral and other relevant support to the needy churches or individuals as Christ Jesus has commanded.

Instagram