ಇಂದು ಗುಡ್ ಫ್ರೈಡೇ; ಈ ದಿನದ ವಿಶೇಷತೆ ಏನು?, ಇಲ್ಲಿದೆ ಸಂಪೂರ್ಣ ಮಾಹಿತಿ
ಕ್ರಿಶ್ಚಿಯನ್ನರ ಪ್ರಮುಖ ಹಬ್ಬಗಳಲ್ಲಿ ಗುಡ್ಫ್ರೈಡೇ ಕೂಡಾ ಒಂದು. ಈ ದಿನದ ವಿಶೇಷತೆ, ಆಚರಣೆ ಕುರಿತ ಮಾಹಿತಿ ಇಲ್ಲಿದೆ.
ಹೈದರಾಬಾದ್: ಕ್ರಿಶ್ಚಿಯನ್ ಸಮುದಾಯಗಳಿಗೆ ವರ್ಷಕ್ಕೆ ಸಿಗುವುದು ಕೇವಲ ಎರಡರಿಂದ ಮೂರು ಹಬ್ಬಗಳು ಮಾತ್ರ. ಅದರಲ್ಲಿ ಪ್ರಮುಖವಾಗಿರುವುದು ಕ್ರಿಸ್ಮಸ್ ಮತ್ತು ಗುಡ್ ಫ್ರೈಡೇ. ಪ್ರತಿ ವರ್ಷ ಈ ಗುಡ್ ಫ್ರೈಡೇಯನ್ನು ಯಾಕೆ ಆಚರಿಸಲಾಗುತ್ತದೆ. ಏನಿದರ ವಿಶೇಷತೆ ಎಂಬ ಕುರಿತು ಕೌತುಕ ಮೂಡುವುದು ಸಹಜ.
ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರದ ಅರ್ಥವನ್ನು ತಿಳಿಯದೇ ಅನೇಕರು ಹಬ್ಬವಾಗಿ ಆಚರಿಸುತ್ತಾರೆ. ಕ್ರೈಸ್ತರ ಪ್ರಕಾರ, ಯೇಸು ಮನುಕುಲದ ಒಳಿತಿಗಾಗಿ ಶಿಲುಬೆಗೇರಿ ತನ್ನ ಪ್ರಾಣ ತ್ಯಾಗ ಮಾಡಿದರು. ಯೇಸು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಅಥವಾ ಬ್ಲಾಕ್ ಫ್ರೈಡೇ ಎಂದೂ ಕರೆಯಲಾಗುತ್ತದೆ. ಯೇಸು ಮರಣ ಹೊಂದಿದ ದಿನದಂದು ಕ್ರಿಶ್ಚಿಯನ್ನರು ಉಪವಾಸ ಆಚರಿಸುತ್ತಾ, ದೇವರ ಜಪ- ಪ್ರಾರ್ಥನೆ ಮಾಡುತ್ತಾರೆ.
ಗುಡ್ ಫ್ರೈಡೇ ಎಂಬ ಹೆಸರು ಬಂದಿದ್ದು ಹೇಗೆ?: ಗುಡ್ ಫ್ರೈಡೇ ಎಂಬ ಹೆಸರು ಹೇಗೆ ಬಂತು ಎಂಬುದರ ಕುರಿತು ವಿವಿಧ ವಾದಗಳಿವೆ. ಗುಡ್ ಫ್ರೈಡೇಯಲ್ಲಿ ಒಳ್ಳೆಯ ದಿನ ಎಂದು ಹಲವರು ನಂಬುತ್ತಾರೆ. ಕೆಲವರು ಯೇಸು ಕ್ರಿಸ್ತನು ಪ್ರಾಣತ್ಯಾಗ ಮಾಡಿ, ಪುನರುತ್ಥಾನಗೊಂಡನು ಎಂದು ಹೇಳುತ್ತಾರೆ. ಈ ದಿನ ಕ್ರಿಶ್ಚಿಯನ್ನರು ಮಾಂಸವನ್ನು ತಿನ್ನುವುದಿಲ್ಲ.
ಗುಡ್ ಫ್ರೈಡೇ ಲೆಕ್ಕಚಾರ?: ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈಸ್ಟರ್‌ಗೆ ಮುಂಚಿನ ಶುಕ್ರವಾರದಂದು ಶುಭ ಶುಕ್ರವಾರವನ್ನು ಆಚರಿಸು ಪದ್ದತಿ ಅನುಸರಿಸಲಾಗಿದೆ.
ವಿವಿಧ ಆಚರಣೆಗಳು: ಕ್ರಿಸ್‌ಮಸ್ ಆಚರಣೆಗಳಿಗಿಂತ ಗುಡ್ ಫ್ರೈಡೇ ತುಂಬಾ ಹಳೆಯದು ಎಂಬ ನಂಬಿಕೆ ಇದೆ. ಇದನ್ನು ಜಗತ್ತಿನೆಲ್ಲಡೆ ಜನರು ವಿವಿಧ ಆಚರಣೆ ಮೂಲಕ ಆಚರಿಸುತ್ತಾರೆ. ಕೆಲವರು ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ 33 ಬಾರಿ ಚರ್ಚ್ ಗಂಟೆಯನ್ನು ಬಾರಿಸುತ್ತಾರೆ. ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್‌ನಲ್ಲಿ ಯೇಸುವಿನ ಜನನದ ದಿನಾಂಕವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆದರೆ, ಬೈಬಲ್‌ನಲ್ಲಿ ಯೇಸುವನ್ನು ಶಿಲುಬೆಗೇರಿಸುವುದರ ಕುರಿತು ಉಲ್ಲೇಖಿಸಲಾಗಿದೆ.
ಕ್ರಿಸ್ತನ ಬೋಧನೆಗಳು: ಈ ದಿನದಂದು ಕ್ರೈಸ್ತರು ಯೇಸು ಹೇಳಿದ ಕೊನೆಯ ಏಳು ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಸ್ತನು ಅನೇಕ ಬೋಧನೆಗಳನ್ನು ಮಾಡಿದ್ದು, ಅವುಗಳಲ್ಲಿ ಪ್ರಮುಖವಾಗಿರುವುದು ನಮ್ಮ ನೆರೆಹೊರೆಯವರನ್ನು ಪ್ರೀತಿಸಿ, ಅವರ ತಪ್ಪುಗಳನ್ನು ಕ್ಷಮಿಸಿ ಎಂಬುದು ಬಹಳ ಪ್ರಮುಖವಾಗಿದೆ.
ಪ್ರೀತಿ, ತಾಳ್ಮೆ, ಶಾಂತಿ ಮತ್ತು ಕ್ಷಮೆ ಇವು ಕ್ರಿಸ್ತನು ತೋರಿಸಿದ ನಾಲ್ಕು ಮಾರ್ಗಗಳು. ಈ ಮಾರ್ಗಗಳನ್ನು ಅನುಸರಿಸುವುದು ಕ್ರಿಸ್ತನಿಗೆ ನಿಜವಾದ ಭಕ್ತಿ ಸಮರ್ಪಣೆ ಮಾಡಿದಂತೆ!