ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಪೂರೈಕೆಗೆ ಉಂಟಾಗಿರುವ ವ್ಯತ್ಯಯಕ್ಕೆ ಸಂಬಂಧಿಸಿ ಮುಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿಯ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದರು.+
ಹೊಸದಿಲ್ಲಿ, ಮಾ.10: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ನೈಸರ್ಗಿಕ ಆನಿಲ ಸಾಗಾಟದಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅವುಗಳ ಪೂರೈಕೆ ಹಾಗೂ ವಿತರಣೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲವು ಅಬಾಧಿತವಾಗಿ ದೊರೆಯುವುದನ್ನು ಖಾತರಿಪಡಿಸಲು ಅತ್ಯಗತ್ಯ ಸಾಮಗ್ರಿಗಳ ಕಾಯ್ದೆಯ ನಿಯಮಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ.
ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಈ ಬಗ್ಗೆ ಆದೇಶವೊಂದನ್ನು ಹೊರಡಿಸಿದ್ದು, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ದ್ರವೀಕೃತ ನೈಸರ್ಗಿಕ ಇಂಧನದ ಸಾಗಾಟದ ಮೇಲೆ ಪರಿಣಾಮವುಂಟಾಗಿದೆ. ಈ ಹಿನ್ನೆ ಲೆಯಲ್ಲಿ ಕೇಂದ್ರ ಸರಕಾರವು ನೈಸರ್ಗಿಕ ಅನಿಲವನ್ನು ಮನೆ, ಆಸ್ಪತ್ರೆ ಮತ್ತಿತರ ಅತ್ಯವಶ್ಯಕ ವಲಯಗಳಿಗೆ ಲಭ್ಯವಾಗುವಂತೆ ನೋಡಿಕೊ ಳ್ಳಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.
ಮಾ.19: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿಯ ತೀವ್ರ ಕೊರತೆಯ ಬಿಸಿ ಆತಿಥ್ಯ ವಲಯಕ್ಕೆ ತಟ್ಟಿದ್ದು, ಒಂದು ವೇಳೆ ಆಡುಗೆ ಅನಿಲ ಪೂರೈಕೆ ಸಹಜ ಸ್ಥಿತಿಗೆ ಬಾರದೆ ಇದ್ದಲ್ಲಿ ಒಂದೆರಡು ದಿನಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳನ್ನು ಮುಚ್ಚಬೇಕಾದೀತೆಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಹೊಟೇಲ್ ಮಾಲಕರ ಸಂಘಗಳು ಕಳವಳ ವ್ಯಕ್ತಪಡಿಸಿವೆ.
ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ ಹೋಟೆಲ್‌ಗಳಿಗೆ ಎಲ್‌ಪಿಜಿ ಕೊರತೆಯ ಬಿಸಿ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಒಂದೆರಡು ದಿನಗಳಲ್ಲಿ ದೇಶಾದ್ಯಂತ ಹೋಟೆಲ್, ರೆಸ್ಟೋರೆಂಟ್‌ಗಳು ಮುಚ್ಚುವ ಸಾಧ್ಯತೆ