ಸರಕಾರಕ್ಕೆ ತೀವ್ರ ಮುಜುಗರ | ಮನವೊಲಿಸಿದ ಸಿಎಂ ಸಂಬಂಧಪಟ್ಟ ಅಧಿಕಾರಿಗಳ ಅಮಾನತು
ಬೆಂಗಳೂರು, ಮಾ. 16: ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸರಿಯಾದ ವೇಳೆಗೆ ಸಚಿವರು ಉತ್ತರ ನೀಡದ ಕಾರಣ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಕಾರ್ಯ ಕಲಾಪ ಮುಂದೂಡಿದರಲ್ಲದೇ, ಸದನದಿಂದಲೇ ಬೇಸರದಿಂದ ಹೊರ ನಡೆದರು. ಆನಂತರ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಿದ - ಪ್ರಸಂಗವು ಜರುಗಿದೆ.
ಭರವಸೆ ನೀಡಿದ ಮುಖ್ಯಮಂತ್ರಿ, ಸಚಿವರು
ಸ್ಪೀಕರ್ ಯು.ಟಿ.ಖಾದರ್ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಚರ್ಚೆ ನಡೆಸಿದರು. ಈ ವೇಳೆ, ಸಚಿವರು ಸದನ ಸೂಕ್ತ ರೀತಿಯಲ್ಲಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬೆಂಗಳೂರು, ಮಾ.16: ಸದನದಲ್ಲಿ ಉತ್ತರಿಸುವಂತೆ ಕೋರಿ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ವಿನಾಕಾರಣ ಉತ್ತರ ನೀಡದ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿ ಅಮಾನತು ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.