ಮಾರ್ಚ್ ತಿಂಗಳ 20,21,22 FUDC (Fellowship of Udupi District Church's) ಇದರ ವತಿಯಿಂದ ನಡೆಯುವಂತಹ "Festival Of Peace" "ಸಮಾಧಾನ ಮಹೋತ್ಸವ" 2026 ಬಹಳಷ್ಟು ತಿಂಗಳುಗಳಿಂದ ತಯಾರಿ ಮಾಡಿಕೊಂಡು ನಡೆಸುತ್ತಿರುವ ಭಕ್ತಿ ಸಂಜೀವನ ಕೂಟ, ಈಗಾಗಲೇ ಬೇರೆ ಬೇರೆ ಜನರು ಬೇರೆ ಬೇರೆ ಸಂಘಟನೆಯವರು ಈ ಒಂದು ಭಕ್ತಿ ಸಂಜೀವನ ಕೂಟ ನಡೆಯಬಾರದೆಂದು ಸಮಾಜಿಕ ಮಾಧ್ಯಮದಲ್ಲಿ ಹಾಗೂ ಕೆಲವು ಮಾಧ್ಯಮದಲ್ಲಿ ಒಂದು ಪತ್ರಿಕಾ ಗೋಷ್ಠಿಯನ್ನು ಮಾಡಿರುತ್ತಾರೆ. ತದನಂತರ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ನಮಗೆ ಬಹಳಷ್ಟು ಒತ್ತಡವನ್ನು ತರುತ್ತಾರೆ. ತಾವು ಬರುವಂತಹ ಅತಿಥಿಯನ್ನು ಬದಲಾಯಿಸಿ ಮತ್ತು ಬೇರೆ ಅತಿಥಿಯನ್ನು ಕರೆತಂದು ಕೂಟ ನಡೆಸಿರಿ ಎಂದು ಸೂಚನೆ ನೀಡಿದ್ದಾರೆ ಆದರೆ ನಾವು ಬಹಳಷ್ಟು ಮಾದ್ಯಮದಲ್ಲಿ, ಚರ್ಚ್ ಗಳಲ್ಲಿ ಪ್ರಚಾರ ಕೊಟ್ಟಿರುವುದರಿಂದ ನಮ್ಮ ದೇವ ಸೇವಕರುಗಳಾದ ಮೋಹನ್ ಸಿ ಲಾಜರಸ್ ಬರುತ್ತಿದ್ದಾರೆ ಎಂದು ಬಹಳಷ್ಟು ಜನ ನಿರೀಕ್ಷೆಯಲ್ಲಿದ್ದಾರೆ ಹಾಗಾಗಿ ನಾವು ನಮ್ಮ ಕರ್ನಾಟಕದ ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋದಾಗ ನ್ಯಾಯಾಲಯ ನಮಗೆ ಕೂಟ ನಡೆಸಲು ಸಂಪೂರ್ಣ ಅನುಮತಿಯನ್ನು ನೀಡಿದೆ ಉಡುಪಿ ಪೊಲೀಸ್ ಇಲಾಖೆ ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಆದೇಶ ಕೊಟ್ಟಿರುತ್ತಾರೆ. ಹಾಗಾಗಿ ಈಗಾಗಲೇ ಮಾದ್ಯಮದಲ್ಲಿ ಬಹಳಷ್ಟ ವಿಚಾರಗಳು ಹರಡುತ್ತಾ ಇದೆ ಈ ಕಾರ್ಯಕ್ರಮ ನಡೆಯುವುದಿಲ್ಲ ಎಂಬುದಾಗಿ ಈ ಯಾವುದೇ ವಿಚಾರಗಳಿಗೆ ಕಿವಿ ಗೊಡದೆ ಎಲ್ಲಾ ಭಕ್ತರು, ಕ್ರೈಸ್ತರು ಸಮಯಕ್ಕೆ ಸರಿಯಾಗಿ ಬರಬೇಕಾಗಿ ಮತ್ತು ಯಾವುದೇ ಅಪಪ್ರಚಾರ ಗಳಿಗೆ ಕಿವಿ ಗೊಡದೆ ದೇವರ ಆಶೀರ್ವಾದ ಪಡೆದುಕೊಳ್ಳಲು ಕೇಳಿಕೊಳ್ಳುತ್ತೇನೆ. ಮತ್ತು ಅದೇ ಸಮಯದಲ್ಲಿ ನಮ್ಮ ಕಡೆಯಿಂದ ಮಾತುಗಳಾಗಲಿ, ವಾಗ್ವಾದಗಳಾಗಲಿ ನಡೆಯಬಾರದು ಈ ಭಕ್ತಿ ಸಂಜೀವನ ಕೂಟ ಬಹಳ ಸಮಾಧಾನದಿಂದ ಯಾರೇ ನಮ್ಮ ಹತ್ತಿರ ವಾಗ್ವಾದ ಮಾಡಿದರು ನಾವು ಸಮಾಧಾನದಿಂದ ವರ್ತಿಸಿ ಈ ಕೂಟವನ್ನು ಯಶಸ್ವಿಗೊಳಿಸೋಣ ಎಂದು FUDC (Fellowship of Udupi District Church's) ಪರವಾಗಿ ಕೇಳಿಕೊಳ್ಳುತ್ತೇನೆ. ಅಧ್ಯಕ್ಷರು ಭಾರತೀಯ ಕ್ರೈಸ್ತ ಒಕ್ಕೂಟ - ಪ್ರಶಾಂತ್ ಜತ್ತನ್ನ
Local News
ಉಡುಪಿ: ಮಾರ್ಚ್ 2026 ರಲ್ಲಿ ಬೃಹತ್ ಸುವಾರ್ತಾ ಕಾರ್ಯಕ್ರಮ "ಸಮಾಧಾನ ಮಹೋತ್ಸವ" ಕಾರ್ಯಕ್ರಮಕ್ಕೆ ಕರ್ನಾಟಕದ ಉಚ್ಛ ನ್ಯಾಯಾಲಯ ಸಂಪೂರ್ಣ ಅನುಮತಿಯನ್ನು ನೀಡಿದೆ
- by Pramod
- MARCH 20, 2026