DECEMBER 9, 2022
  • Grace Plaza, 2nd Floor, Bailoor,Udupi – 576101
International News

ಟ್ರಂಪ್ ಕ್ರಮಗಳ ವಿರುದ್ಧ ಅಮೆರಿಕ, ಯುರೋಪ್​ನಲ್ಲಿ ಭಾರೀ ವಿರೋಧ: ಬೃಹತ್ ಪ್ರತಿಭಟನೆ 85 ಲಕ್ಷ ಜನ ಭಾಗಿ

ಟ್ರಂಪ್ ಕ್ರಮಗಳ ವಿರುದ್ಧ ಅಮೆರಿಕ, ಯುರೋಪ್​ನಲ್ಲಿ ಭಾರೀ ವಿರೋಧ: ಬೃಹತ್ ಪ್ರತಿಭಟನೆ 85 ಲಕ್ಷ ಜನ ಭಾಗಿ

ಟ್ರಂಪ್ ಕ್ರಮಗಳ ವಿರುದ್ಧ ಅಮೆರಿಕ, ಯುರೋಪ್​ನಲ್ಲಿ ಭಾರೀ ವಿರೋಧ: ಬೃಹತ್ ಪ್ರತಿಭಟನೆ

ಡೊನಾಲ್ಡ್ ಟ್ರಂಪ್ ಅವರ ಕ್ರಮಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪಿನ ಹಲವೆಡೆ ಜನರು ಶನಿವಾರ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.

ಸೇಂಟ್‌ ಪೌಲ್‌: ಇರಾನ್ ಮೇಲಿನ ಯುದ್ಧ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪಿನ ಹಲವೆಡೆ ಜನರು ಶನಿವಾರ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ಅವರ ವಲಸೆ ನೀತಿಗಳನ್ನು ಖಂಡಿಸಿ ಮಿನ್ನೆಸೋಟದಲ್ಲಿ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆದಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಬೆಂಬಲ ನೀಡಿದ್ದಾರೆ. ಅಮೆರಿಕದ ಖ್ಯಾತ ಗಾಯಕ ಬ್ರ್ಯೂಸ್‌ ಸ್ಪ್ರಿಂಗ್‌ಸ್ಟಿನ್ ಕೂಡ ಪ್ರತಿಭಟನಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.


ನ್ಯೂಯಾರ್ಕ್​ನಲ್ಲಿ ಲಕ್ಷ ಲಕ್ಷ ಮಂದಿ ಭಾಗಿ: ನ್ಯೂಯಾರ್ಕ್‌ ನಗರದಿಂದ ನಡೆದ ಪ್ರತಿಭಟನೆಯಲ್ಲಿ ಸುಮಾರು 85 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಮೂಲಕ ಟ್ರಂಪ್ ನೀತಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಅಮೆರಿಕದ 50 ರಾಜ್ಯಗಳಲ್ಲೂ ಪ್ರತಿಭಟನೆ: ಅಮೆರಿಕದ 50 ರಾಜ್ಯಗಳಲ್ಲೂ ಪ್ರತಿಭಟನಾ ರ‍್ಯಾಲಿ ನಡೆದಿವೆ. ಟ್ರಂಪ್ ವಿರುದ್ಧ ನೋ ಕಿಂಗ್ಸ್‌ ಹೆಸರಲ್ಲಿ ಒಟ್ಟು 3,100 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಮೊದಲು ಜೂನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷ ಜನ, ಅಕ್ಟೋಬರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ 70 ಲಕ್ಷ ಜನರು ಭಾಗಿಯಾಗಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.


ಯುರೋಪ್​ನಲ್ಲೂ ಪ್ರತಿಭಟನೆ: ಟ್ರಂಪ್ ವಿರುದ್ಧ ಅಮೆರಿಕ ಅಷ್ಟೇ ಅಲ್ಲ ಯುರೋಪ್ ನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಲ್ಯಾಟಿನ್‌ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ನೋ ಕಿಂಗ್ಸ್‌ ರ‍್ಯಾಲಿ ನಡೆಸಿದ್ದೇವೆ ಎಂದು ಆಯೋಜಕರು ಹೇಳಿದ್ದಾರೆ.

ಆರ್ಮ್‌ಸ್ಟರ್‌ಡಮ್, ಮ್ಯಾಡ್ರಿಡ್, ರೋಮ್ ಸೇರಿದಂತೆ ಯುರೋಪಿನ ಹಲವು ನಗರಗಳಲ್ಲಿ ಟ್ರಂಪ್ ವಿರುದ್ಧ ಶನಿವಾರ ಪ್ರತಿಭಟನೆಗಳ ನಡೆದಿವೆ. ಈ ಪ್ರತಿಭಟನೆಗಳಿಗೆ ಭಾರೀ ಪೊಲೀಸ್ ಭದ್ರತೆ ಕೂಡ ನೀಡಲಾಗಿತ್ತು.


ಟ್ರಂಪ್ ಅವರ 79ನೇ ಹುಟ್ಟುಹಬ್ಬದ ವೇಳೆ ಕಳೆದ ಜೂನ್‌ನಲ್ಲಿ ನೊ ಕಿಂಗ್ಸ್ ಹೆಸರಲ್ಲಿ ಮೊದಲ ಬಾರಿಗೆ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಆ ವೇಳೆ ನ್ಯೂಯಾರ್ಕ್‌ನಿಂದ ಸ್ಯಾನ್ ಫ್ರಾನ್ಸಿಸ್ಕೊವರೆಗೆ ಹಲವರು ಪಾಲ್ಗೊಂಡಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಅಭಿಯಾನಕ್ಕೆ ಒಂದೆಡೆ ಬೆಂಬಲ ಸಿಕ್ಕಿರೂ, ಇನ್ನೊಂದೆಡೆ ಅವರ ಕ್ರಮಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ಪರಿಣಾಮ ಇರಾನ್ ಕೂಡ ಪ್ರತಿದಾಳಿ ಆರಂಭಿಸಿದೆ. ಪರಿಣಾಮ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಜಾಗತಿಕವಾಗಿ ತೈಲ ಸಮಸ್ಯೆ ಉಂಟಾಗಿದೆ. ಇದು ಅಮೆರಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.


Related News

About Us

Indian Christian Human Rights Federation

Indian Christian Human Rights Forum is a catalyst body standing by the Churches in India with the passion to cater legal, moral and other support.

This organization was Launched in 2008 and has brought legal and political pressure against the injustice on Christians and provided divers kind of assistance to God's Servants, People and the Needy and is always ready to continue to assist.

We are committed to provide all kind of legal assistance to the Churches in times of atrocities and persecution. Also, we provide moral and other relevant support to the needy churches or individuals as Christ Jesus has commanded.

Instagram