DECEMBER 9, 2022
  • Grace Plaza, 2nd Floor, Bailoor,Udupi – 576101
International News

ಜಾಗತಿಕ ಹಸಿವಿಗೆ ಕಾರಣವಾಗಲಿದೆ ಪಶ್ಚಿಮ ಏಷ್ಯಾ ಯುದ್ದ; ವಿಶ್ವಸಂಸ್ಥೆ ಎಚ್ಚರಿಕೆ

ಜಾಗತಿಕ ಹಸಿವಿಗೆ ಕಾರಣವಾಗಲಿದೆ ಪಶ್ಚಿಮ ಏಷ್ಯಾ ಯುದ್ದ; ವಿಶ್ವಸಂಸ್ಥೆ ಎಚ್ಚರಿಕೆ

ಹವಾಮಾನ ವೈಪರೀತ್ಯಗಳು, ಸಂಘರ್ಷ ಮತ್ತು ಕ್ಷಾಮದ ಪರಿಣಾಮವು ಈಗಾಗಲೇ 320 ಮಿಲಿಯನ್ ಜನರಿಗೆ ತೀವ್ರ ಆಹಾರ ಅಸುರಕ್ಷತೆ ಎದುರಿಸುವಂತೆ ಮಾಡಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.


ರೋಮ್​ (ಇಟಲಿ): ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಗರ್ಷವೂ ಜಾಗತಿಕವಾಗಿ ಹಸಿವಿನ ಸಂಖ್ಯೆ ಹೆಚ್ಚಿಸಲಿದ್ದು, ಇದು ಸಾರ್ವಕಾಲಿಕ ದಾಖಲೆಯಾಗುವ ಬೆದರಿಕೆ ಹಾಕಿಲಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ ತಿಳಿಸಿದೆ.


ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಪ್ರಕಾರ, ಹವಾಮಾನ ವೈಪರೀತ್ಯಗಳು, ಸಂಘರ್ಷ ಮತ್ತು ಕ್ಷಾಮದ ಪರಿಣಾಮವು ಈಗಾಗಲೇ 320 ಮಿಲಿಯನ್ ಜನರನ್ನು ತೀವ್ರ ಆಹಾರ ಅಸುರಕ್ಷತೆ ಎದುರಿಸುವಂತೆ ಮಾಡಿದೆ.


ಪಶ್ಚಿಮ ಏಷ್ಯಾ ಸಂಘರ್ಷ ಮೂರನೇ ವಾರ ತಲುಪಿದ್ದು, ಪರಿಣಾಮವಾಗಿ ಜಾಗತಿಕ ಆಹಾರ ಮತ್ತು ಇಂಧನ ಬೆಲೆಗಳ ಮೇಲೆ ಒತ್ತಡ ಹೆಚ್ಚಿಸಿದೆ. ಆರ್ಥಿಕ ಅಡೆತಡೆಗಳು ಸಂಘರ್ಷದಲ್ಲಿ ಭಾಗಿಯಾಗಿಲ್ಲದ ಜನರು ಮತ್ತು ಅವರ ಮುಖ್ಯ ಆಹಾರದ ಬೆಲೆ ಮೇಲೆ ಪರಿಣಾಮ ಬೀರಲಿದೆ.

ಈ ಕುರಿತು ಜಿನೀವಾದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಆಹಾರ ಕಾರ್ಯಕ್ರಮದ ಉಪ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್ ಸ್ಕೌ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಹೆಚ್ಚುತ್ತಿರುವ ಮಾನವೀಯ ಪರಿಣಾಮಗಳು ದಿನದಿಂದ ದಿನಕ್ಕೆ ಹೆಚ್ಚು ಕಳವಳಕಾರಿಯಾಗುತ್ತಿವೆ. ಮಧ್ಯಪ್ರಾಚ್ಯ ಸಂಘರ್ಷ ಜೂನ್ ತಿಂಗಳವರೆಗೂ ಮುಂದುವರಿದರೆ ಹಾಗೂ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಿದ್ದರೆ, ಬೆಲೆ ಏರಿಕೆಯಿಂದ ಹೆಚ್ಚುವರಿಯಾಗಿ 45 ಮಿಲಿಯನ್ ಜನರು ತೀವ್ರ ಹಸಿವಿಗೆ ಒಳಗಾಗುವ ನಿರೀಕ್ಷೆ ಇದೆ. ಯುದ್ಧದ ಪರಿಣಾಮ ಜೀವನ ವೆಚ್ಚದಲ್ಲಿ ಸುಧಾರಣೆ ಕಾಣುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


ಫೆಬ್ರವರಿ 28ರಂದು ಇರಾನ್​ ಮೇಲೆ ದಾಳಿ ನಡೆಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯ ನಂತರ ಸಂಘರ್ಷ ಪ್ರಾರಂಭಿಸಿತು. ಇದಕ್ಕೆ ಪ್ರತಿಯಾಗಿ ಟೆಹ್ರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಗುರಿಗಳ ವಿರುದ್ಧ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿದ ಪರಿಣಾಮ ಪರಿಸ್ಥಿತಿ ಶೀಘ್ರವಾಗಿ ಹದಗೆಟ್ಟಿದೆ. ಹಾರ್ಮೂಜ್​ ಜಲಸಂಧಿಯ ಹಿಡಿತವೂ ರಸಗೊಬ್ಬರ ರಫ್ತಿಗೆ ಅಡ್ಡಿಯುಂಟಾಗಿದೆ. ಈ ಬಿಕ್ಕಟ್ಟು ಕೃಷಿ ಸ್ಥಿರತೆಗೆ ಬೆದರಿಕೆ ಹಾಕುತ್ತಿದೆ ಎಂದರು.


ಡಬ್ಲ್ಯೂಎಫ್​ಪಿ ಸದ್ಯ ಲೆಬನಾನ್​ನಲ್ಲಿ ಸಕ್ರಿಯವಾಗಿದ್ದು, ಅಲ್ಲಿ ಜನರಿಗೆ ಆಹಾರ ಒದಗಿಸುತ್ತಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಈ ಕಾರ್ಯಾಚರಣೆಗಳನ್ನು ಮುಂದುವರಿಸಲು, ಸಂಸ್ಥೆಯು ತುರ್ತಾಗಿ 77 ಮಿಲಿಯನ್ ಡಾಲರ್​ ಹೆಚ್ಚುವರಿ ಹಣವನ್ನು ಕೋರುತ್ತಿದೆ.

ಯುದ್ಧ ಆರಂಭವಾದ ಬೆನ್ನಲ್ಲೇ ಹಸಿವಿನ ಪ್ರಮಾಣ ಹೆಚ್ಚಿದೆ. ಈಗಿನಷ್ಟು ತೀವ್ರವಾಗಿ ಎಂದಿಗೂ ಇರಲಿಲ್ಲ. ತೀವ್ರ ಆಹಾರ ಅಭದ್ರತೆಯು ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಅಗತ್ಯದ ಹೊರತಾಗಿಯೂ, ಅಂತಾರಾಷ್ಟ್ರೀಯ ಹಣಕಾಸು ಕೊರತೆಯಿಂದಾಗಿ ಡಬ್ಲ್ಯೂಎಫ್​ಪಿ ಕೂಡ ಸಂಪನ್ಮೂಲ ಕಡಿತವನ್ನು ಅನುಭವಿಸುತ್ತಿದೆ.


Related News

About Us

Indian Christian Human Rights Federation

Indian Christian Human Rights Forum is a catalyst body standing by the Churches in India with the passion to cater legal, moral and other support.

This organization was Launched in 2008 and has brought legal and political pressure against the injustice on Christians and provided divers kind of assistance to God's Servants, People and the Needy and is always ready to continue to assist.

We are committed to provide all kind of legal assistance to the Churches in times of atrocities and persecution. Also, we provide moral and other relevant support to the needy churches or individuals as Christ Jesus has commanded.

Instagram